Land Surveyor Image

Candidate must submit only one application for the post. If the candidate submits more than one application for the post such applications will be rejected

ಅಭ್ಯರ್ಥಿಯು ಒಂದು ಹುದ್ದೆಗೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸತಕ್ಕದ್ದು. ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಸಲ್ಲಿಸಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು

ಅಭ್ಯರ್ಥಿಗಳು online ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಅಧಿಸೂಚನೆಗಳನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳತಕ್ಕದ್ದು.
ಹಂತ – 1

  1. ಅಭ್ಯರ್ಥಿಗಳು ಅಧಿಸೂಚನೆ ಹಾಗೂ ಸೂಚನೆಗಳನ್ನು ತಪ್ಪದೇ ಓದಿಕೊಂಡ ನಂತರ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು.

  2. ಇಲಾಖೆಯ ವೆಬ್ ಸೈಟ್ ‘http://sslr.kar.nic.in’ ನ Home Page ನಲ್ಲಿ ಹುದ್ದೆಯ ಎದುರು ಇರುವ ‘Apply’ ಬಟನ್ ಅನ್ನು click ಮಾಡಿದಾಗ ಪರದೆಯ ಮೇಲೆ ಅರ್ಜಿ ನಮೂನೆಯು ಮೂಡುತ್ತದೆ. ಅಭ್ಯರ್ಥಿಯು ಅನ್ವಯಿಸುವ ಎಲ್ಲಾ ವಿವರಗಳನ್ನು ಭರ್ತಿ ಮಾಡತಕ್ಕದ್ದು.

  3. ಅಭ್ಯರ್ಥಿಗಳು, ಇತ್ತೀಚಿನ ಪಾಸ್ ಪೋರ್ಟ ಅಳತೆಯ ಭಾವಚಿತ್ರವನ್ನು ಒಂದು ಹಾಳೆಯ ಮೇಲೆ ಅಂಟಿಸಿ, ಅದರ ಕೆಳಗೆ ಕಪ್ಪು ಶಾಹಿಯ ಸ್ಕೆಚ್ Pen ನಲ್ಲಿ ಪೂರ್ಣವಾಗಿ ಸಹಿ ಮಾಡಿ ಅದನ್ನು Scan ಮಾಡಿ Upload ಮಾಡಬೇಕು.

  4. ಅಭ್ಯರ್ಥಿಗಳು ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ‘Preview’ ಬಟನ್ ಮೇಲೆ click ಮಾಡಿದರೆ Preview Page ಮೂಡುತ್ತದೆ.

  5. ಪ್ರತಿ ಅರ್ಜಿಗೆ ಒಂದು Application number ನೀಡಲಾಗುತ್ತದೆ. ಅಭ್ಯರ್ಥಿಗಳು Application number ಅನ್ನು ತಪ್ಪದೇ ಬರೆದಿಟ್ಟುಕೊಂಡಿರತಕ್ಕದ್ದು. ಮುಂದಿನ ಹಂತದಲ್ಲಿ Application number ನ್ನು ಅರ್ಜಿಯ ಬಗ್ಗೆ ಮಾಹಿತಿ ಪಡೆಯಲು ಬಳಸಬೇಕಾಗುತ್ತದೆ.

  6. ಅಭ್ಯರ್ಥಿಗಳು ಭರ್ತಿ ಮಾಡಲಾದ ಎಲ್ಲಾ ವಿವರಗಳು ಪರದೆಯ ಮೇಲೆ ಮೂಡಿದ ನಂತರ ಮತ್ತೊಂದು ಸಲ ಕೂಲಂಕುಷವಾಗಿ ಪರಿಶೀಲಿಸಿ, ಏನಾದರೂ ತಪ್ಪುಗಳಿದ್ದಲ್ಲಿ ‘Edit’ ಬಟನ್ ಮೇಲೆ click ಮಾಡಿ ಅಗತ್ಯ ತಿದ್ದುಪಡಿಗಳನ್ನು ಮಾಡುವುದು.

  7. ಅರ್ಜಿಯಲ್ಲಿ ದಾಖಲಿಸಿರುವ ಎಲ್ಲಾ ಮಾಹಿತಿಯು ಸರಿ ಎಂದು ಖಾತರಿಪಡಿಸಿಕೊಂಡ ನಂತರ ‘submit’ ಬಟನ್ ಅನ್ನು click ಮಾಡಬೇಕು. ‘submit’ ಬಟನ್ click ಮಾಡಿದ ನಂತರ ಶುಲ್ಕವನ್ನು ಪಾವತಿಸಲು ಅಧಿಕೃತ ಬ್ಯಾಂಕ್ ನ Challan ಪ್ರತಿ ಮತ್ತು ಅರ್ಜಿಯ ಪ್ರತಿ ಮೂಡುತ್ತದೆ. Challan ಮತ್ತು ಅರ್ಜಿಯ ಪ್ರತಿಯನ್ನು Print ಮಾಡಿಕೊಂಡು ಅಧಿಕೃತ ಬ್ಯಾಂಕ್ ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸುವುದು.

ಹಂತ – 2
  1. ಶುಲ್ಕ ಪಾವತಿಸಿದ ನಂತರ ಇಲಾಖೆಯ Web Site ‘http://sslr.kar.nic.in’ ನಲ್ಲಿ ‘Upload Challan Button’ click ಮಾಡಬೇಕು.

  2. ನಂತರ ಅಭ್ಯರ್ಥಿಯು ತನ್ನ Application number ದಾಖಲಿಸಿದಲ್ಲಿ ಶುಲ್ಕ ಪಾವತಿಸಿದ ಬಗ್ಗೆ ಪರದೆಯ ಮೇಲೆ Challan ಮಾಹಿತಿ ದಾಖಲಿಸಲು ನಮೂನೆ ಮೂಡುತ್ತದೆ.

  3. ಶುಲ್ಕ ಪಾವತಿಸಿದ Challan ಮಾಹಿತಿಯನ್ನು ದಾಖಲಿಸಿದ ನಂತರ ಬ್ಯಾಂಕ್ Challan ಪ್ರತಿಯನ್ನು Scan ಮಾಡಿ Upload ಮಾಡತಕ್ಕದ್ದು.

Note:

ಭೂಮಾಪಕರ ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಹತೆ, ಅನುಭವದ ಪ್ರಮಾಣ ಪತ್ರ (ನಿಗಧಿಪಡಿಸಿದಂತೆ), ಮೀಸಲಾತಿ ಪ್ರಮಾಣ ಪತ್ರ ಅಥವಾ ಇತರೆ ಯಾವುದೇ ಪ್ರಮಾಣ ಪತ್ರ / ಅಂಕ ಪಟ್ಟಿಗಳನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕಡೆಯ ದಿನಾಂಕದೊಳಗಡೆ ಸಕ್ಷಮ ಪ್ರಾಧಿಕಾರಿಗಳಿಂದ ಪಡೆದಿರಬೇಕು.

FOR THE POST OF ‘LAND SURVEYORS’, EDUCATIONAL QUALIFICATION, EXPERIENCE (IF PRESCRIBED) RESERVATION CERTIFICATES, OR ANY OTHER CERTIFICATES / MARKS CARDS, SHOULD HAVE BEEN OBTAINED FROM THE RESPECTIVE AUTHORITIES BEFORE THE LAST DATE PRESCRIBED FOR FILING OF ONLINE APPLICATIONS.

.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:

01.07.2011 10.00 AM IST

.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :(ಬ್ಯಾಂಕ್ ಚಲನ್ ಮುದ್ರಿಸಿಕೊಳ್ಳಲು ಕೊನೆಯ ದಿನಾಂಕ)

30.07.2011 

.

ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ:

01.08.2011

.

ಶುಲ್ಕ ಪಾವತಿಸಲಾದ ಜರ್ನಲ್ ನಂಬರ್ ನಮೂದಿಸಲು ಕೊನೆಯ ದಿನಾಂಕ:

05.08.2011 

ಸೂಚನೆ:-‘ ಪರೀಕ್ಷಾ ದಿನಾಂಕಗಳನ್ನು ಇಲಾಖಾ ವೆಬ್ ಸೈಟ್ ನಲ್ಲಿ 15.08.2011 ಕ್ಕೆ ಮುಂಚಿತವಾಗಿ ಪ್ರಕಟಿಸಲಾಗುವುದು’

Proceed